Posts

No pictures, but memories for lifetime

Image
picture credit @sampigeeee That which was beautiful has Ended!! Leaving no clue of the Paradise Lost. Memories are immense but, traces inadequate. Each time I pass those old lanes, still scented with jasmine rain— where our laughter once echoed, and dreams carved on broken walls— a skirmish awakens. Nostalgic senses struggle to recreate the memoir.

ವೃತ್ತ

ಮಧು signal ಹತ್ರ ಕರ್ಚಿಫ್ ಮಾರಿ ಬಂದ ಹಣದಲ್ಲಿ ಮುದ್ದೆ ಊಟ ಮಾಡೋಕೆ ಅಂತ ಹೋಗ್ಬರೋದ್ರೊಳಗೆ, ಅವನ ಖಾಯಂ ಕಲ್ಲು ಬೆಂಚಿನ ಜಾಗದಲ್ಲಿ ಯಾರೋ ಬಂದು ಡೇರಾವು ಹಾಕಿರೋದು ನೋಡಿ.. ಪಿತ್ತ ನೆತ್ತಿಗೆ ಎರ್ತು.. ಆಕಡಿಕ್ಕೆ ಮಕಾ ಮಾಡಿ ಮಲ್ಕೊಂಡಿದ್ದ ವ್ಯಕ್ತಿ ಭುಜ ಅಲ್ಲಾಡಿಸಿ... "ಯ್ಯೋ ಎಳ್ಯಯ್ಯ ಮೇಲೆ.. ಸ್ವಲ್ಪ ಹೊತ್ತು ಮನಿಕೋಬೇಕು" ಎಂದ ಮಧು. ಜಪ್ಪಯ್ಯ ಅಂದ್ರು ತಿರುಗಲಿಲ್ಲ... ಸತಗಿತ್ ಹೋಗಬುಟವ್ನ, ಎನ್ ಗತಿ ಅಂತ.. ಮತ್ತೆ ಮೆಲ್ಲಗೆ ಭುಜ ತಟ್ಟಿ.. "ಯ್ಯೋ... ಏಳು... ಎಂದ ಈ ಕಡಿಕ್ಕೆ ತಿರ್ಗಿದ ಒಬ್ಬ ಹುಡುಗ.. ದೇಹ ಬೆಳೆದಿತ್ತು ಆದ್ರೆ ಮುಖ ಎಳಸು...ಅಳ್ತಾ ಇದ್ದ.... ಅಳೋ ಹುಡುಗನ ನೋಡಿ ಕಸಿವಿಸಿಯಾಯಿತು ಮಧುಗೆ. ಮುದ್ದೆ ಉಂಡಮೇಲೆ ಒಂದು ತಾಸು ಅಂಗಾತ ಮನಿಕೊಂಡ್ರೆ ಮೈಯಲ್ಲಿ ಇರೋ ಆಯಾಸ ಎಲ್ಲಾ ಮಂಗಮಾಯ. ಎಷ್ಟೇ ಬಿಸಿಲು ಇದ್ರು ಆ ಪಾರ್ಕಿನಲ್ಲಿ ಮರದ ಕೆಳಗೆ ಇದ್ದ ಬೆಂಚಿನ ಮೇಲೆ ಮಲಗಿದರೆ ಮಧುಗೆ ಅಮ್ಮನ ಮಡಿಲಲ್ಲಿರುವ ಪುಟ್ಟ ಮಗುವಿನ ಅನುಭವ. ಆದ್ರೆ ಇವ್ನು ಯಾವೋನ್ಲ ನನ್ನ ಟೇಮು ಹಾಳು ಮಾಡತಾವ್ನೆ, ಅತ್ಕೊಂಡು ಸುರ್ಕೊಂಡು...ಅಂತ ಮನಸಲ್ಲೇ ಗೊಣಗಿ.. ಅವನ ಮುಖ ದಿಟ್ಟಿಸಿದ... ಹೇ....ಇವ್ನು......ಆ ಮೂಲೆ ಮನೆ ಪೆದ್ದ ಮಗ ಅಲ್ವಾ...."ಹೇ ಯಾಕೋ ಅಳೋದು..ಅಳ್ಬೇಡ ಕಣೋ................ಹೊಟ್ಟೆ ಹಸಿತದ.." ಆ ಹುಡುಗ ಅಳ್ತಾ... "ಹ್ಞೂ.... ಊಟ ಬೇಕುಉ ಉ.....ಆ... ಅಮ್ಮಾs..... ಅಮ್ಮ..." ಎಂದ...

ಎಲ್ರು ಕಾಲ್ ಎಳಿತದೇ ಕಾಲ

"ಅದೇನೋs ಅಂತರೆಲ್ಲ..ಅಪ್ಪ ಹಾಕಿದ್ ಆಲದ ಮರಕ್ಕೆ......, ಸುಣ್ಣ ತತ್ತರೇ ನಿಂಗಿ.... ಅಂತ ಸೊಂಟಕ್ಕೆ ಸಿಕ್ಕಿಸಿದ್ದ ಬಟ್ಟೆಚೀಲದಿಂದ ಡೊಂಕಪಂಕವಾಗಿ ಮಡಿಸಿದ್ದ ಒಂದು ಅರೆ ಒಣಗಿದ್ದ ವೀಳ್ಯದೆಲೆ ತೆಗೆದು, ರವಷ್ಟು ಬೆರೆಳಿಂದ ಚೀಲದ ಅಡಿಯಲ್ಲಿದ್ದ ಅಡಿಕೆ ಪುಡಿ ಬಾಚಿಕೊಂಡು ದವಡೆಗೆ ಉಂಡೆ ಮಾಡಿ ಸೇರಿಸಿ.. ನಿಂಗವ್ವ ಶಾಮ್ಮಣ್ಣರ ಹಳೇ ಪೆಟ್ಟಿ ಅಂಗಡಿಯ ಮುಂದೆ ಇದ್ದ ಕಂಬಕ್ಕೆ ಒರಗಿ ಕುಳಿತು,ಕಾಲು ಚಾಚುತ್ತಾ ಗುನುಗಿದಳು ಕೆಂಪಮ್ಮ. ಹಳೇ ಪೆಟ್ಟಿ ಅಂಗಡಿಯ ಮರದ ನೆಲಹಾಸು ನುಣ್ಣಗೆ ಆಗಿದ್ದವು. ಅಲ್ಲಲ್ಲಿ ಮೊಳೆಗಳು ಎದಿದ್ದವು. ಹೋದ ಯುಗಾದಿಗೆ ಕಟ್ಟಿದ್ದ ಮಾವಿನ ತೋರಣ ಒಣಗಿ ಹೋಗಿತ್ತು. ಮೂಲೆಯಲ್ಲಿ ಮಾದಪ್ಪನ ಮುಂದೆ ಹೊತ್ತಿಸಿದ್ದ ಧೂಪ ಇನ್ನು ಗಂಧಸೂಸುತಿತ್ತು. ಬಾಟಲುಗಳಲ್ಲಿ ಅರ್ಧ ತುಂಬಿದ್ದ ನಿಂಬೆಹುಳಿ, ಮಿಠಾಯಿ ಎಲ್ಲವೂ ಕುಂತಲ್ಲೇ ಕೂತು ಸಪ್ಪೆಯಾಗಿದ್ದವು. ಕಡ್ಡಿಪುಡಿ, ಬೀಡಿ, ಬೆಂಕಿ ಪೊಟ್ಟಣ, ಸಿಗರೇಟ್ ಪೊಟ್ಟಣಗಳು, ಬಿಸ್ಕತ್ತು, ಚಿಪ್ಸ್ ಪಾಕಿಟ್ಟು, ಸೋಡಾ ಬಾಟ್ಲಿ, ಪೆಪ್ಸಿ ಹಿಂಗೆ ಹಲವಾರು ವಸ್ತುಗಳಿಂದ ತುಂಬಿತ್ತು ಆ ಪೆಟ್ಟಿ ಅಂಗಡಿ., ದಿನಾ ಯಾಪಾರ ಮಾಡುತ್ತ, ಕಾಲಕ್ಕೆ ತಕಂತೆ ವಸ್ತುಗಳ ಬದಲಿಸಿ ಇಂದಿಗೂ ಪೆಟ್ಟಿ ಅಂಗಡಿಯಿಂದ ಸಂಪಾದನೆ ಮಾಡುವುದು ಕಷ್ಟದ ಮಾತು. ನಿಂಗವ್ವ ಶಾಮಣ್ಣ ಇಬ್ಬರು ಇಂದಿಗೂ ಪೇಟೆಗೆ (ಬೆಂಗಳೂರು ಮಾರ್ಕೆಟ್ ) ಹೋಗಿ ಸಾಮಾನು ತಂದು, ಯಾಪಾರ ಮಾಡಿ ಜೀವನ ಮಾಡ್ತಾ ಅವ್ರೆ. ಊರು ಜೀವನಕ್ಕೆ ದಾರಿ ಮಾಡ್ತದೆ. ...

those leaves in the breeze, just like the tender feelings in my heart

Image

ನಮ್ಮ ಊರಿನಲ್ಲಿ ಶೂಟಿಂಗ್ - ೧

ನಮ್ಮೂರಿನಲ್ಲಿ ಆಗ ಬಹಳ ಕನ್ನಡ ಚಿತ್ರಗಳ shooting ಮಾಡ್ತಿದ್ರು. ಬೇಸಿಗೆ ರಜೆ ಬಂದ್ರೆ ಊರಲ್ಲಿ ಯಾವುದಾದರೂ ಒಂದು ಚಿತ್ರತಂಡ ಬಿಡಾರ ಬಿಟ್ಟಿರುತಿತ್ತು. "ಕಿಂದರಿ ಜೋಗಿ", "ಮುದ್ದಿನ ಮಾವ", "ತೇನಾಲಿ ರಾಮ" (ಹಿಂದಿ ಸೀರಿಯಲ್), "ಮಾಂಗಲ್ಯ" ಹೀಗೆ ಬಹು ಪ್ರಸಿದ್ಧ ಚಿತ್ರಗಳ shooting ನಮ್ಮ ಊರಿನಲ್ಲೇ ಮಾಡಿದ್ದು. ಈ ಚಿತ್ರಗಳ ಕೃತಜ್ಞತೆ ವಿಭಾಗವ ಸೂಕ್ಷ್ಮವಾಗಿ ಗಮನಿಸಿದರೆ. ನಮ್ಮೂರು ಯಾವುದು ಅನ್ನೋದು ಕಂಡುಹಿಡಿಯುವುದು ಕಷ್ಟದ ಕೆಲಸ ಅಲ್ಲವೇ ಅಲ್ಲಾ. ಸಿನಿಮಾ ತಾರೆಯರ ನೋಡುವುದು, ದಿನ ಪೂರ್ತಿ shooting ಮಾಡುವುದ ಬೇಜಾರು ಮಾಡಿಕೊಳ್ಳದೆ, ಅವರಿಗೆ ನೇರವಾಗಿ ದಿನ ಕಳಿಯುವ ಭಾಗ್ಯ ಮತ್ತೆ ಲಭಿಸಿವುದು ದೂರದ ಮಾತು. ಈ ರೀತಿ ಕಾಲ ಕಳೆಯುವವರು ಯಾರು ಅಂದ್ರ, ಅದೇ ನಾವುಗಳು. ರಜೆಗೆ ಅಜ್ಜನ ಮನೆಗೆ ಹೋದವರು, ಕೆಲ್ಸವಿಲ್ಲದೇ ನೌಕರಿ ಹುಡುಕೋ ಅಣ್ಣಂದಿರು, ಅಕ್ಕಂದಿರು, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ ಎಲ್ರು. ವಿಷ್ಣುವರ್ಧನ್, ಮಾಲಾಶ್ರೀ, ರವಿಚಂದ್ರನ್, ಜೂಹಿ ಚಾವ್ಲ, ಶಶಿಕುಮಾರ್, ಶ್ರುತಿ, ರಾಮಕುಮಾರ್, ರಮೇಶ್, ದೊಡ್ಡಣ್ಣ, ದ್ವಾರಕೀಶ್.. ಹೀಗೆ ಬಹಳ ಸಿನಿಮಾ ರಂಗದವರ ನೋಡಿದ ಹೆಗ್ಗಳಿಕೆ ನನ್ನದು. 😂 ಇರ್ಲಿ, ಇದು ಎಲ್ಲರಿಗೂ ಸಾಧ್ಯವೇ.. ಇಲ್ಲಾ ತಾನೇ. ಸಮಾಧಾನ. ಮುಂದ... ಮುಂದ... ನನ್ನ ನೆನಪಲ್ಲಿ ಅಚ್ಚಳಿಯದೇ ಉಳಿದಿರುವ ಕೆಲವು ಸಿನಿಮಾ shooting, ಅದರಲ್ಲೂ ಕಿಂದರಿಜೋಗಿಯ ಒಂದು scene...

ಮಳೆ -ನೆನಪು

ಅಳಿಸೀತೇ ಹೆಜ್ಜೆ ಗುರುತ, ಭೋರ್ಗರೆವ ಮಳೆಯು. ದುಃಖ ದುಮ್ಮಾನವ ಹುಮ್ಮಳಿಸಿ, ಹೀಯಾಳಿಸಿ ಹಿಗ್ಗಿಸಿ ಕುಗ್ಗಿಸಿ ಛೀಮಾರಿ ಹಾಕೀತೇ.. ಧೋ..ಎಂದು ಸುರಿವ ಮಳೆಯ ರಭಸಕೆ, ಕೊಚ್ಚಿಹೋಗುವ ಅವಶೇಷವಲ್ಲವೀ ನೆನಪೆನ್ನುವಾ ಮಾಯೇ.. ಎಷ್ಟೇ ಜಿನುಗಿದರು , ತೊಯ್ದು ಹೋಗದೀ ಛಾಯೆ.

🌼ಮೃದುಲ🌼

ಹಾಸನಕ್ಕೆ ಹೋಗುವ ಹೆದ್ದಾರಿಯಲ್ಲಿ ರೈಲ್ವೆ ಕ್ರಾಸ್ಸಿಂಗ್ ಹತ್ರ ಪೇರಲ ಹಣ್ಣು ಮಾರುತಿದ್ದ ಪುಟ್ಟ ಹುಡುಗಿಯ ಕಂಡು, ಸುಗುಣಮ್ಮ ಕೈಬೀಸಿ ಕರೆದರು. ಅಂದು ತುಂಬಾ ಕಾರುಗಳು ನಿಂತಿದ್ದವು. ಪೇರಲ ಹಣ್ಣಿನ ವ್ಯಾಪಾರ bumper. ಆ ಹುಡುಗಿ, ಸುಗುಣಮ್ಮ ಹಾಗು ಮೃದುಲ ಇದ್ದ ಕಾರಿನ ಬಳಿ ಬಂದು, ತನ್ನ ಬುಟ್ಟಿ ಹಿಡಿದಳು. ಸುಗುಣಮ್ಮ ಐದು ಹಣ್ಣು ಆರಿಸಿ ತನ್ನ ಸೀರೆಯ ಜೋಳಿಗೆ ಮಾಡಿ ಬಾಗಿನ ತುಂಬಿ ಕೊಳ್ಳುವ ಹಾಗೆ ಹಣ್ಣುಗಳ ಹಾಕೊಂಡ್ರು. ಪೇರಲ ಅವರ ನೆಚ್ಚಿನ ಹಣ್ಣು, ಅದರಲ್ಲೂ ಮಾಗಿದ ಪೇರಲೇಹಣ್ಣು ಬಿಡದೇ ತಿನ್ನುತಿದ್ದರು. ಬೆಂಗಳೂರಿಗೆ ಬಂದಾಗ ಪೇರಲ ಹಣ್ಣು ಬಿಡುವ ಕಾಲ ಬಂದರು ಒಂದು ಹಣ್ಣು ತಿನ್ನದೇ ಇದ್ದರು. ಇಲ್ಲಿ ಕಂಡ ಕೂಡಲೇ ಮಗುವಿನ ಹಾಗೆ ಮಾಗಿದ ಹಣ್ಣುಗಳ ಮೇಲೆ ಕಣ್ಣು ಹಾಯಿತು. ಒಂದೆರಡು ಹಣ್ಣು, ಮಿಕ್ಕಿದು ಅಷ್ಟೇನೂ ಮೆತ್ತಗೆ ಇರದ ಹಣ್ಣುಗಳ ನೋಡಿ. ಸುಗುಣಮ್ಮ - "ಎಷ್ಟಾಯ್ತು?" ಎಂದರು. ಆ ಹುಡುಗಿ "ಮೂವತ್ತು ರೂಪಾಯಿ" ಎಂದು ಒಣ ಧ್ವನಿಯಲ್ಲಿ ಉಲಿದಳು. ಅಷ್ಟರಲ್ಲಿ ಹಿಂದನ ಟೆಂಪೋ ಟ್ರಾವೆಲರ್ ನಲ್ಲಿದ್ದ ಮಹಿಳೆ "ಏ ಹುಡುಗಿ ಬಾ ಇಲ್ಲಿ " ಎಂದು ಕರಿಯಲು, ಬುಟ್ಟಿ ಹಿಡಿದು ಅಲ್ಲಿಗೆ ಓಡಿದಳು ಆ ಹುಡುಗಿ. ಐದು ಹಣ್ಣು ಸೀರೆಯ ಜೋಳಿಗೆಯಲ್ಲಿ ತುಂಬಿಸಿದ್ದ ಸುಗುಣಮ್ಮ, ತನ್ನ ಬ್ಲೌಸ್ ಒಳಗೆ ಇಟ್ಟಿದ್ದ ಪರ್ಸ್ ತೆಗೆದು ಕಾಸು ಏಣಿಸುವಷ್ಟರಲ್ಲಿ ಕಾರ್ ರೈಲ್ವೆ ಕ್ರಾಸ್ಸಿಂಗ್ ಪಾಸ್ ಆಗಿತ್ತು. ಸುಗುಣಮ್ಮ ಪಕ್ಕ ಕೂತಿದ...