ಕಾಗದದ ದೋಣಿ ⛵️
ಅವತ್ತು ಮಧ್ಯಾಹ್ನ ಉರಿ ಬಿಸಿಲು, ತುಂಬಾ ಕೆಲಸ. ಫ್ಯಾನಿಗೆ ಬಿಡುವಿಲ್ಲದೆ ತಿರು-ತಿರುಗಿ ಸುಸ್ತಾಗಿತ್ತು. ಮನಸ್ಸು ಮಳೆಯಾಗಲಿ ಎಂದು ಬೇಡುತ್ತಿತ್ತು. ಹಠಾತ್ ಸಿಡಿಲ ಶಬ್ದ ಕೇಳಿಸಿತು. ನೋಡ-ನೋಡುತ್ತಲೇ ಕೋಣೆಯ ತುಂಬಾ ಕತ್ತಲೆ ಆವರಿಸಿತು. "ದಡ್" ಎಂದು ಮತ್ತೊಂದು ಸಿಡಿಲು ಬಡಿದು ನನ್ನನ್ನು ತಾರಸಿಗೆ ಹೊತ್ತೊಯ್ಯಿತು. ತಾರಸಿಯಲ್ಲಿ ಅಮ್ಮ "ಬಟ್ಟೆ ತೆಗಿ ಬೇಗ, ಮಳೆ ಬರುವ ಹಾಗಿದೆ" ಅಂತ ಕೂಗಿದರು. ಇತ್ತ ಅಜ್ಜಿ ಮಜ್ಜಿಗೆ ಮೆಣಸಿನಕಾಯಿ ಇದ್ದ ಮೋರ, ಹಪ್ಪಳ, ಒಣಗಿ ಹಾಕಿದ್ದ ಸೀರೆ - ಇವೆಲ್ಲವನ್ನೂ ಎರಡು ಕೈಲಿ ಹಿಡಿದು ಬಿರಬಿರನೆ ಮೆಟ್ಟಿಲು ಇಳಿದು ಹೋದರು. ಅಮ್ಮನ ಕೂಗಾಟ ನನಗೆ ತಾಕೇ ಇಲ್ಲ ಎಂಬಂತೆ, ಆಕಾಶಕ್ಕೆ ಮುಖವೊಡ್ಡಿ ನನ್ನೆರಡು ಕೈಗಳನ್ನು ಚಾಚಿ ಮಳೆಯ ಬರುವಿಕೆಗೆ ಕಣ್ಮುಚ್ಚಿ ನಿಂತೆ. ಆ ಮೊದಲ ಹನಿಯು ಹಣೆಗೆ ಬೊಟ್ಟು ಇಟ್ಟಾಗ, ನನ್ನ ತನುವೆಲ್ಲ ಕಂಪಿಸಿ, ಯಾರೋ ಅಪ್ಪಿದ ಹಾಗೆ ಅನಿಸಿತು. ಸ್ವಲ್ಪ ನಗು ಚೆಲ್ಲಿ ಮತ್ತೆ ಮೋಡವ ದಿಟ್ಟಿಸಿ ನೋಡಲು, ಸಣ್ಣ ಸಣ್ಣ ನೀರ ಮಣಿಗಳು ನನ್ನ ಬಳಿ ಧಾವಿಸಿ ಬಂದಂತೆ ಅನಿಸಿತು. ವರ್ಷದ ಪ್ರಥಮ ವರ್ಷಧಾರೆ. 🌧️🌧️ ಕಾದ ಇಳೆ ಮೊದಲ ಮಳೆಗಾಗಿ ಅದೆಷ್ಟು ಕಾಯುತ್ತಿತ್ತೋ ಎಂಬಂತೆ, ಮಳೆ ಹನಿಗಳ ಚುಂಬನಕ್ಕೆ ಪುಳಕಗೊಂಡು ಘಮ್ ಎಂದು ಪರಿಮಳ ಸೂಸಲಾರಂಭಿಸಿತು. "ಭೂಮಿ" ಸುಗಂಧದ ಮನೆಯಾಗಿಸಿ, ಒಣಗಿದ ಗಿಡ ಮರಗಳಿಗೆ ಮರುಚೇತನ ನೀಡಿ, ಪ್ರಾಣಿ ಪಕ್ಷಿಗಳಿಗೆ ಉಚಿತ...
Comments
Post a Comment