ಮಳೆ -ನೆನಪು

ಅಳಿಸೀತೇ ಹೆಜ್ಜೆ ಗುರುತ,
ಭೋರ್ಗರೆವ ಮಳೆಯು.
ದುಃಖ ದುಮ್ಮಾನವ
ಹುಮ್ಮಳಿಸಿ, ಹೀಯಾಳಿಸಿ
ಹಿಗ್ಗಿಸಿ ಕುಗ್ಗಿಸಿ
ಛೀಮಾರಿ ಹಾಕೀತೇ..

ಧೋ..ಎಂದು ಸುರಿವ ಮಳೆಯ
ರಭಸಕೆ, ಕೊಚ್ಚಿಹೋಗುವ
ಅವಶೇಷವಲ್ಲವೀ
ನೆನಪೆನ್ನುವಾ ಮಾಯೇ..
ಎಷ್ಟೇ ಜಿನುಗಿದರು ,
ತೊಯ್ದು ಹೋಗದೀ ಛಾಯೆ.

Comments

Popular posts from this blog

ಕಾಗದದ ದೋಣಿ ⛵️

No pictures, but memories for lifetime

ನಮ್ಮ ಊರಿನಲ್ಲಿ ಶೂಟಿಂಗ್ - ೧