ನಮ್ಮ ಊರಿನಲ್ಲಿ ಶೂಟಿಂಗ್ - ೧

ನಮ್ಮೂರಿನಲ್ಲಿ ಆಗ ಬಹಳ ಕನ್ನಡ ಚಿತ್ರಗಳ shooting ಮಾಡ್ತಿದ್ರು. ಬೇಸಿಗೆ ರಜೆ ಬಂದ್ರೆ ಊರಲ್ಲಿ ಯಾವುದಾದರೂ ಒಂದು ಚಿತ್ರತಂಡ ಬಿಡಾರ ಬಿಟ್ಟಿರುತಿತ್ತು.
"ಕಿಂದರಿ ಜೋಗಿ", "ಮುದ್ದಿನ ಮಾವ", "ತೇನಾಲಿ ರಾಮ" (ಹಿಂದಿ ಸೀರಿಯಲ್), "ಮಾಂಗಲ್ಯ" ಹೀಗೆ ಬಹು ಪ್ರಸಿದ್ಧ ಚಿತ್ರಗಳ shooting ನಮ್ಮ ಊರಿನಲ್ಲೇ ಮಾಡಿದ್ದು.
ಈ ಚಿತ್ರಗಳ ಕೃತಜ್ಞತೆ ವಿಭಾಗವ ಸೂಕ್ಷ್ಮವಾಗಿ ಗಮನಿಸಿದರೆ. ನಮ್ಮೂರು ಯಾವುದು ಅನ್ನೋದು ಕಂಡುಹಿಡಿಯುವುದು ಕಷ್ಟದ ಕೆಲಸ ಅಲ್ಲವೇ ಅಲ್ಲಾ.

ಸಿನಿಮಾ ತಾರೆಯರ ನೋಡುವುದು, ದಿನ ಪೂರ್ತಿ shooting ಮಾಡುವುದ ಬೇಜಾರು ಮಾಡಿಕೊಳ್ಳದೆ, ಅವರಿಗೆ ನೇರವಾಗಿ ದಿನ ಕಳಿಯುವ ಭಾಗ್ಯ ಮತ್ತೆ ಲಭಿಸಿವುದು ದೂರದ ಮಾತು. ಈ ರೀತಿ ಕಾಲ ಕಳೆಯುವವರು ಯಾರು ಅಂದ್ರ, ಅದೇ ನಾವುಗಳು. ರಜೆಗೆ ಅಜ್ಜನ ಮನೆಗೆ ಹೋದವರು, ಕೆಲ್ಸವಿಲ್ಲದೇ ನೌಕರಿ ಹುಡುಕೋ ಅಣ್ಣಂದಿರು, ಅಕ್ಕಂದಿರು, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ ಎಲ್ರು.

ವಿಷ್ಣುವರ್ಧನ್, ಮಾಲಾಶ್ರೀ, ರವಿಚಂದ್ರನ್, ಜೂಹಿ ಚಾವ್ಲ, ಶಶಿಕುಮಾರ್, ಶ್ರುತಿ, ರಾಮಕುಮಾರ್, ರಮೇಶ್, ದೊಡ್ಡಣ್ಣ, ದ್ವಾರಕೀಶ್.. ಹೀಗೆ ಬಹಳ ಸಿನಿಮಾ ರಂಗದವರ ನೋಡಿದ ಹೆಗ್ಗಳಿಕೆ ನನ್ನದು. 😂

ಇರ್ಲಿ, ಇದು ಎಲ್ಲರಿಗೂ ಸಾಧ್ಯವೇ.. ಇಲ್ಲಾ ತಾನೇ. ಸಮಾಧಾನ.

ಮುಂದ...

ಮುಂದ... ನನ್ನ ನೆನಪಲ್ಲಿ ಅಚ್ಚಳಿಯದೇ ಉಳಿದಿರುವ ಕೆಲವು ಸಿನಿಮಾ shooting, ಅದರಲ್ಲೂ ಕಿಂದರಿಜೋಗಿಯ ಒಂದು scene ಶೂಟಿಂಗ್ ಬಗ್ಗೆ ತಿಳಿಸುವ ಆಸೆ.

Scene:

ಸುಂದರರಾಜ್ರವರ ಕಾಲು ಫ್ಯಾನ್ಗೆ ನೇತು ಹಾಕಿರುವ ದೃಶ್ಯ. ಅದನ್ನು ನೋಡಿ ಜೂಹಿ "ಅಯ್ಯೋ ಅಯ್ಯಯ್ಯೋ... ಏನ್ ಅಣ್ಣಾ ಇದು ಮೈಯಲ್ಲಾ ಬ್ಯಾಂಡೇಜು...." ಅಂತ ಹೇಳುವ ಡೈಲಾಗ್. ಅವ್ರು ಹಾಗೆ ಹೇಳಿದ ಮೇಲೆ, ಕಾಲು ಮುರಿದದ್ದು ಕಿಂದರಿ ಜೋಗಿ ಅಂತ ಅವರಿಗೆ ಹೇಳಿ ನಂಬಿಸುವ ಕೆಲಸ. ಆಮೇಲೆ ಮೈಸೂರು ಲೋಕೇಶ್ ಅವರು ಬಂದು ಹತ್ತು ರೂಪಾಯಿಗೆ ಬಾಯಿಗೆ ಬಂದ ಹಾಗೆ ಬೈಯ್ದು ಹೋಗುವಾಗ ಫ್ಯಾನ್ ON  ಮಾಡಿ ಹೋಗುವುದು.

ಇಲ್ಲಿ ನಮ್ಮ ರವಿಚಂದ್ರನ್ ಬಗ್ಗೆ ಎರಡು ಮಾತು ಹೇಳಬೇಕು. ಮೊದಲನೇದು ಅವರಿಗೆ ಇದ್ದ ಕನ್ನಡಾಭಿಮಾನ, ಆಮದು ನಟಿಯರಿಂದ ಕನ್ನಡ ಉಲಿಸಿದ ಶ್ರೇಯಸ್ಸು ಇವರಿಗೆ ಕೊಡಬೇಕು. ಒಬ್ಬರು prompter ಜೂಹಿ ಅವರಿಗೆ ಸದಾಕಾಲ ಇರುತ್ತಿದ್ದರು. ಅವರು ಕನ್ನಡದಲ್ಲೇ ಡೈಲಾಗ್ ಡೆಲಿವರಿ ಮಾಡಿರುವುದು ಮೆಚ್ಚಲೇ ಬೇಕಾದ ಸಂಗತಿ.
ಇನ್ನೊಂದು ವಿಷ್ಯ ಅಂದರೆ ಅವರ ಬೃಹತ್ ಸೆಟ್ಟುಗಳು. ಅಲ್ಲಿ ಎಲ್ಲಾ child artistಗಳ ಕರೆದುಕೊಂಡು ಬಂದಿದ್ದರು, ಹಿರಿಯ ಹಲವಾರು artistಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲರನ್ನು ಒಳಗೊಂಡು ಕೆಲಸ ಮಾಡುವುದು ಸುಲಭದ ಮಾತಲ್ಲ. ಕ್ರೇಜಿ star is really great.

ಶೂಟಿಂಗ್ ನಡೀತಾ ಇದ್ದದ್ದು ನಮ್ಮ ತಾಯಿಯ ದೊಡ್ಡಪ್ಪನ ಮನೆಯಲ್ಲಿ.
ಅಲ್ಲಿ ನಾವೆಲ್ಲಾ ಹಾಜರ್, ಜೂಹಿ ನೋಡಲು ಬಹಳ ಜನ ಇದ್ದರು.
ಆ ಮನೆಯ ಹಿರಿಯ ಹೆಂಗಸರು ನೋಡಿ ನೋಡಿ ಸಾಕಾಗಿ ಕೋಣೆಗೆ ಹೋಗಿ ಕುಳಿತಿದ್ದರು. ಆದರೆ ನೋಡುಗ ಮಹಾಶಯರು ಮಾತ್ರ ಬೇಸರವಿಲ್ಲದೆ take ಮೇಲೆ take ನೋಡುತಲ್ಲೇ ಇದ್ದರು.

ಜೂಹಿ ಅವ್ರು ಅಣ್ಣಾ ಅನ್ನುವ ಬದಲು, "ಅನ್ನಾ ಅನ್ನಾ" ಅಂದಾಗಲೆಲ್ಲ ನಾವುಗಳು ನಕ್ಕಿದೊ ನಕ್ಕಿದು. ಕೊನೆಗೂ take ok ಮಾಡಿದರು.
ಸಿನಿಮಾ ನೋಡುವಾಗ ಫ್ಯಾನ್ ON ಮಾಡಿದ ಹಾಗೆ ಭಾಸವಾಗುತ್ತೆ ಆದರೆ ಅಲ್ಲಿ ಶೂಟಿಂಗ್ ಮಾಡಿದ್ದೇ ಬೇರೆ ರೀತಿ.

ಮನೆಗೆ ಬಂದಮೇಲೂ ಅದರ ಬಗ್ಗೆ ಚರ್ಚೆ ಮಾಡಿಯೇ ಮಲಗಿದ್ದು.
ಇದೇ ಚಿತ್ರದ ಹಾಡೊಂದು ಶೂಟಿಂಗ್ "ಜಯ ಹನುಮ" ಮಾಡುವಾಗ ರವಿಚಂದ್ರನ್ ಅವರು ಒಂದು ದೊಡ್ಡ ಫ್ಯಾನ್ ತಂದು ಬಸ್ ಸ್ಟಾಂಡ್ ಹಿಂದೆ ಇದ್ದ ಜಾಗದಲ್ಲಿ ಇರಿಸಿದ್ದರು. ಸರಿಯಾಗಿ power ಇರದ ನಮ್ಮೂರಿನಲ್ಲಿ ಈ ಪಾಟಿ ದೊಡ್ಡ fan ಹೇಗೆ ಚೇಲಾಯಿಸುತ್ತಾರೆ ಅನ್ನೋದು ನಮ್ಮ ಅಜ್ಜಿಯ ಪ್ರೆಶ್ನೆ ಆಗಿತ್ತು. ಈ ಕಾಡುವ ಪ್ರೆಶ್ನೆಗೆ ಉತ್ತರವೇ ಅಂದು ಸಾಯಂಕಾಲ ಬಂದ ಜನರೇಟರ್ ವ್ಯಾನ್. ಅದೆಷ್ಟು tube lights ತಂದಿದ್ದರೋ. ಒಂದು ಊರಿನಷ್ಟು ಜನ ಬಂದರು. ಅವ್ರೆಲ್ಲರ makeup, ಊಟ ಎಲ್ಲಾ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.
ದೊಡ್ಡ ದೊಡ್ಡ ಡ್ರಮ್ಗಳು,ದೊಡ್ಡ ಹನುಮನ statue ಎಲ್ಲವೂ.. ಮೆಗಾ.. ಮೆಗಾ..
ಹೀಗೆ ಮೂರು ನಾಲ್ಕು ದಿನ ಮಾಡಿದನ್ನೇ ಮಾಡಿ ಮಾಡಿ ಶೂಟಿಂಗ್ ಮುಗಿಸಿದರು.

ಈ ಚಿತ್ರ ಬಿಡುಗಡೆಯಾಗುವುದನ್ನು ನಾವೆಲ್ಲರೂ ಕಾದೆವು. ಯಾಕೋ ಅಂದುಕೊಂಡ ಹಾಗೆ ಬೇಗ ಬರಲಿಲ್ಲ. ಕೊನೆಗೆ ಶಾಂತಿ ಥೀಯೇಟರ್ನಲ್ಲಿ ಈ ಚಿತ್ರನೋಡಲು ಹೋದೆವು. ಊರಿನ ಮೇಲಿನ ಅಭಿಮಾನ, ನಮ್ಮ ಊರಿನ ಕೆಲ ಜನರ ಮುಖ ದರ್ಶನ ಪರದೆ ಮೇಲೆ ನೋಡಿ ಖುಷಿ ಪಟ್ಟು ಮನೆಗೆ ಹೋಗಿ ಮತ್ತೆ ಅದೇ fan scene ನೆನಿಸಿಕೊಂಡು ನಕ್ಕಿದ್ದು ಇಂದಿಗೂ ನೆನಪಿದೆ.

ಈಗಲೂ ಈ ಚಿತ್ರ ಟೀವಿಯಲ್ಲಿ ಬಂದಾಗ ನಮ್ಮ ಊರಿನ ನೆನಪಿಸಿ ಕಾಡಿಸಿ ಹೋಗುತ್ತದೆ.

ಇಂತದ್ದೇ ಇನ್ನೊಂದು ಚಿತ್ರದ ಬಗ್ಗೆ ಬರಿಯೋದು ಇದೆ...😊

Comments

Popular posts from this blog

ಕಾಗದದ ದೋಣಿ ⛵️

No pictures, but memories for lifetime