ಜೀವನ ಸಹಜ ಸ್ಥಿತಿಗೆ.....

ಎಸ್ಕಲೇಟರ್ ತುಂಬಿ ತುಳುಕುತ್ತಿತ್ತು. ಕೇವಲ ಕೆಲವು ತಿಂಗಳ ಹಿಂದಷ್ಟೇ ಜಗತ್ತನ್ನೇ ಕಾಡಿದ್ದ ಆ ಮಹಾಮಾರಿ (Pandemic) ಮುಗಿದಿದೆ ಎಂದು ನಂಬಲು ಅಸಾಧ್ಯವಾಗುವಷ್ಟು ಜನರ ನೂಕುನುಗ್ಗಲು. ಕಳೆದೆರಡು ವರ್ಷಗಳಲ್ಲಿ 'Rush-hour' ಎಂಬ ಶಬ್ದವೇ ಎಷ್ಟು ಅರ್ಥಹೀನವಾಗಿ ಹೋಗಿತ್ತು!
​ಬದುಕನ್ನೇ ಸ್ತಬ್ಧಗೊಳಿಸಿ, ನಿಂತಲ್ಲೇ ನಿಲ್ಲಿಸಿದ್ದ ಆ ಅಗಾಧ ಶಕ್ತಿ ಈ ಜನಜಂಗುಳಿಯ ನಡುವೆ ಬಹುಶಃ ಕಣ್ಮರೆಯಾಗಿರಬಹುದು ಎಂದು ಅಶ್ವಿನಿಗೆ ಅನಿಸತೊಡಗಿತು.

​"ಈ ನೂಕುನುಗ್ಗಲಿಗೂ ಒಂದು ಅಸ್ಮಿತೆ ಇದೆ. ನಿರ್ದಿಷ್ಟ ಸ್ಥಳಕ್ಕೆ ಹೋಗಲು ಇಷ್ಟವಿಲ್ಲದವರು ಅಥವಾ ಅತೀವ ಉತ್ಸಾಹದಲ್ಲಿರುವವರು—ಎಲ್ಲರನ್ನೂ ಇದು ಯಾವುದೇ ಭೇದವಿಲ್ಲದೆ ತದೇಕಚಿತ್ತದಿಂದ ಅವರವರ ನಿಲ್ದಾಣಕ್ಕೆ ತಲುಪಿಸುತ್ತದೆ. Just like Destiny. An unbiased, unabashed treatment to all."

ಮೆಟ್ರೋ ಹತ್ತಿ ಬಾಗಿಲ ಬಳಿ ಜಾಗ ಮಾಡಿಕೊಂಡು ನಿಂತ ಅಶ್ವಿನಿಗೆ, ತನ್ನ ಸುತ್ತಲಿನ ಪ್ರಪಂಚ ಅಸ್ಪಷ್ಟವಾಗತೊಡಗಿತು. ತನ್ನದೇ ಆಲೋಚನೆಯಲ್ಲಿ ಮುಳುಗಿದಳು.

​"ಮತ್ತೆ ಜೀವನ ಸಹಜ ಸ್ಥಿತಿಗೆ ಮರಳಿದೆ... Hello hello, ಇಷ್ಟೊಂದು ಒಳ್ಳೆ ಕನ್ನಡ ಮಾತಾಡ್ಬಿಟ್ಟೆ ಕಣ್ರಿ ಅನ್ಕೊಂಡ್ರಾ? ಎಲ್ಲಾ ನಮ್ಮ ಸುದ್ದಿ ವಾಹಿನಿಗಳ ಕೃಪಾಕಟಾಕ್ಷ! Anyways, things are back to normal.. ಹಾನ್, ಇವಾಗ ಸರಿ ಹೋಯ್ತು. ಈ ನಮ್ಮ ಬೆಂಗಳೂರು ಜನ ಒಂದು ಎರಡು English words use ಮಾಡ್ದೆ ಇದ್ರೆ ಆಗುತ್ತಾ? ನೀವೇ ಹೇಳಿ."

"ಸರಿ ಸರಿ ವಿಷಯಕ್ಕೆ ಬರೋಣ... ವಿಷಯ ಏನಪ್ಪಾ ಅಂದ್ರೆ, things are back to normal. ಆದ್ರೆ ಎಲ್ಲವೂ ಅಲ್ಲ. ಒಂದಷ್ಟು ಜನರನ್ನು ಕಳೆದುಕೊಂಡ ದುಃಖ, ಅವರ ನೆನೆದರೆ ಆಗುವ ನೋವು, ಅವರ ಅನುಪಸ್ಥಿತಿ... Oh god, ತಡ್ಕೊಳೋಕೆ ಆಗ್ತಿಲ್ಲ."

ಮನಸ್ಸಿನ ತುಮುಲಗಳಿಗೊಂದು Bluetooth speaker ಇದ್ದಿದ್ದರೆ, ಅಶ್ವಿನಿಯ ಈ ಮನದ ಮಾತುಗಳು ಎಲ್ಲರಿಗೂ ಕೇಳಿಸಬಹುದಿತ್ತೇನೋ. ತನ್ನ ದುಪಟ್ಟಾದಿಂದ ಕಣ್ಣಂಚಿನ ಹನಿಯನ್ನೊತ್ತಿ, ಮತ್ತೆ ಯೋಚನಾ ಲಹರಿಯಲ್ಲಿ ಮುಳುಗಿದಳು.

"Well ಈವಾಗ ನಾನು ಮೆಟ್ರೋ ಹತ್ತಿ ಇಂದಿರಾನಗರಕ್ಕೆ ಹೋಗ್ತಾ ಇದೀನಿ.
ಯಾಕೆ? ಅಂತ ಕೇಳಿದ್ರ., ಇರಿ ಹೋದ್ಮೇಲೆ ನಿಮಗೆ ಗೊತಾಗುತ್ತೆ.
ಇನ್ನು ಮೂರ್ stop ಇದೆ."


Ulsoor metro station ಬಳಿ ಇಳಿದು. ಒಂದು ಫರ್ಲಾಂಗ್ ನಡೆದಳು ಅಶ್ವಿನಿ. ಅಲ್ಲೇ ಒಂದು arch ಕಂಡಿತು.
ಒಳಗೆ ಹೋಗಿ, office ಅಂತ ಬೋರ್ಡ್ ಇದ್ದ ರೂಮ್ಗೆ ಹೋದಳು.

ಒಂದು ಅರ್ಧ ಗಂಟೆ ಕಳೀತು Arch ಮುಂದೆ ಒಂದು sedan ಬಂದು ನಿಂತಿತು.
ಅಶ್ವಿನಿ ಒಂದು ಕೈಯಲ್ಲಿ ಬಾಗ್ ಹಿಡಿದು, ಇನ್ನೊಂದ್ ಕೈಯಲ್ಲಿ ಒಬ್ಬ highschool ಹುಡುಗನ ಕೈ ಹಿಡಿದು ಕಾರ್ ಸಮೀಪಿಸಿದಳು.

ಭವಿಷ್ ಬಿಕ್ಕಿಸಿದ... ಅಶ್ವಿನಿ ಆ ಹುಡುಗನ ತಲೆ ಸವರಿ.. "ಯಾಕೆ? ಏನ್ ಆಯಿತು?" ಅಂದಳು.

ಆ ಹುಡುಗ ಇನ್ನು ಜೋರಾಗಿ ಬಿಕ್ಕಳಿಸಿದ.
ಅಶ್ವಿನಿ ಅವನ ಅಪ್ಪಿಕೊಂಡು, ಹಣೆಗೊಂದು ಮುತ್ತಿಟು. "ಯಾಕಳುವೆ ಎಲೆ ಕಂದ ಬೇಕಾದ್ದು ನಿನಗೀವೆ... Dont cry.
I am here for you, your New Mother" ಎಂದಳು.

ಮನೆಗೆ ಹೋಗುವಾಗ ಇಬ್ಬರು ಮೌನ. ಇಬ್ಬರು ಕಾರ್ ವಿಂಡೋ ಗ್ಲಾಸ್ ನೋಡುತಿದ್ದ ರೀತಿ ನೋಡಿದರೆ ಯಾವುದಾದರು ಸಿನಿಮಾ ಕಾಣಿಸುತ್ತಿದೆಯೇ ಅಲ್ಲಿ ಅನಿಸುತ್ತಿತ್ತು. ಯಾವುದು ಮರುಕಳಿಸಿದೆಯೋ ಗೊತ್ತಿಲ್ಲ, ಬೆಂಗಳೂರು ಮಹಾನಗರಿಯ ವಾಹನ ದಟ್ಟಣೆ ಮಾತ್ರ ಹಿಂತಿರುಗಿತ್ತು.
Fly over ಮೇಲೆ ಹೆಜ್ಜೆ ಮೇಲೆ ಹೆಜ್ಜೆ ಇಡುತ ಸಾಗಿದ್ದ ಗಾಡಿಗಳ ನಡುವಿಂದ ನುಸುಳಿ ಬಂದು ಅಶ್ವಿನಿಯ ಸ್ಮೃತಿ ಪಲ್ಲಟಕೆ ಬಡಿಯಿತು ನೆನಪುಗಳ ಅಲೆ.

ತಾನೊಬ್ಬ ಕಲಾವಿದೆ ಅನ್ನೋ ಕಾರಣಕ್ಕೆ ಐದು ವರ್ಷದ ಪ್ರೇಮವನ್ನು ಮರೆತು, ಮನೆಯಲ್ಲಿ ತೋರಿಸಿದ ಹುಡುಗಿಗೆ ಮೂರು ಗಂಟು ಹಾಕಿ, ಭಾರತದಿಂದ ಗಂಟು ಮೂಟೆ ಕಟ್ಟಿ ಒಂದಷ್ಟು ವರ್ಷ ವಿದೇಶ ಸುತ್ತಾಡಿ. ಮಗ ಅಲ್ಲಿ ಬೆಳೆದರೆ ಹಾಳಾಗಬಹುದು ಅನ್ನೋ calculation ಇಂದ ತಾಯಿನಾಡಿಗೆ ವಾಪಾಸ್ ಆದ ಸತೀಶ, ನಾಲ್ಕು ವರ್ಷದ ಹಿಂದೆ FBನಲ್ಲಿ friend request ಕಳಿಸಿದಾಗ. Accept ಮಾಡದೆ ತಪ್ಪು ಮಾಡಿದೆನಾ ಅನಿಸಿತ್ತು, Covid ಬಂದಾಗ college ಸ್ನೇಹಿತರ WA ಗ್ರೂಪ್ನಲ್ಲಿ ಅವನ family ಫೋಟೋ ಹಾಕಿ RIP message ನೋಡಿದಾಗಲೇ.

ಮದುವೆಯಲ್ಲಿ ನಂಬಿಕೆ ಹೋಗಿ, ಕಲೆಗೆ ಆದಷ್ಟು ಸಮಯ ಅರ್ಪಿಸಿ. ಸಂಬಂಧದ ಸುಳಿವಿಂದ ದೂರ ಇರಲು ಇಚ್ಚಿಸಿದ್ದ ನನಗೆ. ವಿವೇಕ ಸಿಕ್ಕಿದು, ಅವನ ಸಹನೆ, ಪ್ರೀತಿಗೆ ಬೆಲೆ ಕೊಟ್ಟು 2019 ಮದುವೆ ಆದ ನನಗೆ covid ಕೊಟ್ಟ ಬಹುಮಾನ ಖಾಲಿಯಾದ ಮನೆ, ಬರಿದಾದ ಮನ.
ಪ್ರೀತಿ ತುಂಬಿದ ಗಂಡ, ಅವನ ತಂದೆ ತಾಯಿ ಎಲ್ಲರ ಕಸಿದು-ಕೇಕೆ ಹಾಕಿ ನಗುತಿದ್ದ ದುಷ್ಠ ಕಾಲ ಒಂದಿತ್ತು.
ಜೀವನವೇ ಬೇಡ ಎನಿಸುತಿತ್ತು, ಆದರೆ... ಒಂದು ದಿನ ಭವಿಷ್ ಬಗ್ಗೆ WA groupನಲ್ಲಿ ಬಂದ message."ನಾನಿನ್ನು ಬದುಕಬೇಕು.. ಯಾರಿಗಾಗಿ? ಭವಿಷ್ಗಾಗಿ... "
ಅವನ ಮುಖ, ಸತೀಶನ ನೆನಪಿಸಿತು.

ಜೀವನದ ಮತ್ತೊಂದು ದಾರಿ, ಜವಾಬ್ದಾರಿ ತೆರೆಯಿತು.

Friends ಎಲ್ಲರು ಅವನ ಇರುವಿಕೆ ಬಗ್ಗೆ ತಿಳಿಸಿದರು.
ಒಂದೇ ಮನಸಿನಿಂದ ದೃಢ ನಿರ್ಧಾರ..........

"Ma'am, maam gpay ಮಾಡ್ತಿರಾ, ಕ್ಯಾಶ.." ಎಂಬ ಗಡಸು ಧ್ವನಿ ಕಿವಿಗೆ ಬಡಿದಾಗ ಎಚ್ಚರವಾಯಿತು ಅಶ್ವಿನಿಗೆ.

ಪಕ್ಕದಲ್ಲಿ ಸ್ವಲ್ಪ ಭಯದಲ್ಲೇ ಕೂತಿದ್ದ ಭವಿಷ್, ಕೆಳಗೆ ಬಿದಿದ್ದ ಅಶ್ವಿನಿ purse ತೆಗೆದು ಕೊಟ್ಟ.

ಇಬ್ಬರ ಮುಖದಲ್ಲಿ ಏನೋ ಒಂದು ಸಣ್ಣ ನಗು ಮಿಂಚಿತು.

ಮನೆಯ ಬೀಗ ತೆಗೆದು, ಭವಿಷ್ನ ಅಲ್ಲೇ ನಿಲ್ಲಿಸಿ. ಮುಂಚೆನೇ ಆರತಿ ತಟ್ಟೆ ready ಮಾಡಿ ಇಟ್ಟಿದ್ದನ್ನು ತಂದು ಅವನಿಗೆ ಆರತಿ ಬೆಳಗಿ, ಹಣೆಗೆ ಕೆಂಪು ನೀರಿನ ತಿಲಕವಿಟ್ಟು ಅವನನ್ನ ಬರಮಾಡಿಕೊಂಡಳು.

ಮನೆಯೆಲ್ಲಾ ನೋಡಿ tv ಮುಂದೆ ಬಂದ ಭವಿಷ್, tv on ಮಾಡಿ Sofa ಮೇಲೆ ಕುಳಿತ.
"ಜನ ಜೀವನ ಸಹಜ ಸ್ಥಿತಿಗೆ ಮರಳಿದೆ".... ಎಂದು 108ನೇ ಬಾರಿ Breaking ನ್ಯೂಸ್ ಕೊಡುತ್ತಿದ್ದ anchor ನೋಡಿ ಇಬ್ಬರಿಗು ನಗು ತಡೆಯಲು ಆಗದೆ ಒಬ್ಬರನ್ನು ಒಬ್ಬರು ನೋಡಿ ಮನಸಾರೆ ನಕ್ಕರು..

ಯಾರು ಇರಲಿ ಬಿಡಲಿ ಜೀವನ ಸಹಜ ಸ್ಥಿತಿಗೆ ಮರುಕಳಿಸಿಯೇ ಬಿಡುತ್ತೆ....

"ಎಲ್ಲವೂ ಕಳೆದುಕೊಂಡ ಹಲವರಿಗೆ.
ಸಕಲವೂ ಕಳೆದುಕೊಂಡ ಇನ್ನು ಕೆಲವರೇ ಆಸರೆ."




Comments


  1. 👌👌👌😍ತುಂಬಾ ಚೆನ್ನಾಗಿದೆ...
    ಎಲ್ಲವೂ ಕಳೆದುಕೊಂಡ ಹಲವರಿಗೆ.
    ಸಕಲವೂ ಕಳೆದುಕೊಂಡ ಇನ್ನು ಕೆಲವರೇ ಆಸರೆ....
    ನಿಜ, ಕಳೆದು ಕೊಂಡವರಿಗೆ ಕಳೆದುಕೊಂಡವರೆ ಆಸರೆ...

    ReplyDelete
    Replies
    1. ಹೌದು ಅನುಭವಿದವರಿಗೇ ಅರಿವ ಹಾಗು ಆದರಿಸುವ ಮನಸ್ಸು ಬರುವುದು.

      Delete

Post a Comment

Popular posts from this blog

ಕಾಗದದ ದೋಣಿ ⛵️

No pictures, but memories for lifetime

ನಮ್ಮ ಊರಿನಲ್ಲಿ ಶೂಟಿಂಗ್ - ೧