ಅಮ್ಮನ ವೀಣೆ


(PC in the pic)

ಅಮ್ಮ ನುಡಿಸುತಿದ್ದ ವೀಣೆ ಧೂಳು ಹೊಡಿಯುವಾಗ ತಂತಿ ಮುರಿದು ಹೆಂಡ್ತಿ ಬೆರಳಿಗೆ ಪೆಟ್ಟಾಯಿತು.
ಬಾಯಿಗೆ ಬಂದ ಹಾಗೆ, ಮನಸ್ಸಿಗೆ ಬಂದಹಾಗೆ, ಬೈದು ಕೊನೆಗೆಂದಳು. "ತೊಗೊಂಡು ಹೋಗಿ ಬಿಸಾಕಿ ಇಲ್ಲಾ ಅಂದ್ರೆ ನಂಗೆ ಗೊತ್ತಿದೆ ಏನು ಮಾಡ್ಬೇಕು ಅಂತ" ಎಂದು. ಬಾಗಿಲು ಬಡಿದು roomಗೆ ಹೋದಳು.
ಅಮ್ಮನ ವೀಣೆ, ಆಕೆ ಒಲವಿನಿಂದ ನುಡಿಸುತ್ತಿದ್ದ ವೀಣೆ. ನಮ್ಮ ಬಾಲ್ಯದ ನೆನಪಿನಲಿ ವೀಣೆಯ ಬಹುಪಾಲು ಚಿತ್ರಣ ಹಾದು ಹೋಯಿತು.
ಅಪ್ಪ ಸತ್ತಾಗ, ಅಮ್ಮ ವೀಣೆ ನುಡಿಸಿ ನಮ್ಮಗೆ ತುತ್ತು ಅನ್ನ ಹಾಕಿದ ದಿನಗಳು.
ವೀಣೆಯ ರಿಪೇರಿಗೆ ಕೂಡಿಟ್ಟ ಹಣದಲ್ಲಿ ಬಟ್ಟೆ ಕೊಡಿಸಿದ ಸಂದರ್ಭಗಳು.
ಸರಸ್ವತಿ ಪೂಜೆಗೆ ಸಜ್ಜಾಗುತ್ತಿದ್ದ ವೀಣೆಯ ನೆನಪು.
ಅಮ್ಮ....
ಅಮ್ಮ....
ಮನಸಲ್ಲಿ ಎಲ್ಲೋ ಹಿಂದಕ್ಕೆ ಸಾಗಿದ್ದ ನನಗೆ "ಇನ್ನು ಇಲ್ಲೇ ಇದೆ, ಇರಿ ಮಾಡ್ತಿನಿ..." ಎಂದು ಅವಳು ಅದರ ಬಳಿ ಧಾವಿಸಿದ ರೀತಿಗೆ ಎಚ್ಚರವಾಗಿ. ಹೋಗಿ ವೀಣೆಯೇ ನನ್ನ ತಾಯಿ ಎಂಬಂತೆ ಬಿಗಿದಪ್ಪಿದೆ.

ಅವಳು ನಿಂತಳು, ನಾ ಅಮ್ಮನ ಹೊತ್ತು ಬಾಗಿಲ ಬಳಿ ಬಂದೆ.
ಯಾರು ತಡೆಯಲಿಲ್ಲ...
ಬಹಳ ದೂರ ಎತ್ತುಕೊಂಡೇ ಹೊರಟೆ.. ಅಮ್ಮನ..

ಅಲ್ಲಿ ಬಾಗಿಲ ಬೀಗ ಹಾಕಿದ್ದರು.
ನಾವಿದ್ದ ಬಾಡಿಗೆ ಮನೆ ಅಲ್ವಾ...
ಬಾಗಿಲಿಗೆ ಅಮ್ಮನ ಕೂರಿಸಿ.. ನಿಟ್ಟುಸಿರು ಬಿಟ್ಟೆ....
Phone ತೆಗುದು ನೋಡಿದರೆ 13 missed callಗಳಿದ್ದವು.
Manager call, Hello...

"Hey Mahesh, why haven't you connected to the meeting.
Had I not told you it's an important call and not miss it!!.
How irresponsible can you be?

I have rescheduled it, it's going to begin in another 15 min. Make sure you connect...."

"Oh No.. ಆಟೋ ಆಟೋ... ಕೊಡಿಗೇಹಳ್ಳಿ  Sunrise apartment ಬರ್ತಿರಾ..."
"100 ಆಗುತ್ತೆ..."

"ಅಯ್ತು ಬನ್ನಿ...."
"ಹತ್ತಿ ಹತ್ತಿ...."



ಹೀಗೆ ಹಿಂತುರುಗಿ ನೋಡದೆ,ಜೀವನ ಪಯಣದಲಿ ಯಾವುದರ ಹಿಂದೆಯೋ ಬೆನ್ನತ್ತಿ ಹೊರಟ ಮಗನ ಕಾಯುವ ಕಾಯಕ..
                                            ಇಂತಿ ಪ್ರೀತಿಯ ಅಮ್ಮ,
                                          ವೀಣಾ ವಿದುಷಿ ಸುಶೀಲ

Comments

  1. ಎಂಥ ವಿಪರ್ಯಾಸ, ಭಾವನಾತ್ಮಕವಾಗಿ ಕೆಲವು ವಸ್ತು, ಜೀವಗಳಿಗೆ ನಾವು ಹತ್ತಿರವಾಗಿರುತ್ತವೆ, ಆದರೆ ಕಾರಣಾಂತರಗಳಿಂದ ಅದರ ಬೆಲೆ ಅರಿಯದ ಕೆಲವರಿಗಾಗಿ‌ ನಾವು ಆ ಸಂಭಂದ ಕಡಿದು ಕೊಳ್ಳುವ ಪರಿಸ್ಥಿತಿ ಬಂದಾಗ ಕಾಡುವ ಪ್ರಶ್ನೆ, "ಭಾವನೆಗಳಿಗೆ ಬೆಲೆ ಇಲ್ಲವೇ!?"

    ReplyDelete
    Replies
    1. 🙏🙏
      ಹೌದು.....ಉಸಿರು ಮಾಯವಾದ ಕೂಡಲೇ, ಉಸಿರಾಡುತ್ತದ್ದ ಪ್ರೀತಿಯ ವಸ್ತುಗಳು ಅಸ್ತಿತ್ವ ಕಳೆದುಕೊಂಡು ಮೂಲೆ ಗುಂಪಾಗುತ್ತವೆ.

      Delete

Post a Comment

Popular posts from this blog

ಕಾಗದದ ದೋಣಿ ⛵️

No pictures, but memories for lifetime

ನಮ್ಮ ಊರಿನಲ್ಲಿ ಶೂಟಿಂಗ್ - ೧