ತೋಚ್ಚಿದ್ದು ಗೀಚಿದ್ದು - ಭಾಗ 1

ಕವನ ಬರಿಯುವ ಹಂಬಲ ಬಹಳ, ಆದರೆ ಪದಗಳೇ ಸಿಗದೇ ಒದ್ದಾಡಿದ್ದೆ ಹಲವು ಸಲ. ಏನೋ ಮನಸಿಗೆ ಬಂದ ಕೆಲವು ಭಾವನೆಗಳಿಗೆ ಜೀವ ತುಂಬಿರುವೆ, ಸರಳ ತೀರಾ ಸರಳ ಏನಿಸಬಹುದು, ಇವು ನನ್ನ ಸಣ್ಣ ಪ್ರಯತ್ನಗಳಷ್ಟೇ, ಮುಂದೊಂದು ದಿನ ಯಾರಿಗೆ ಗೊತ್ತು ನಾನು ಒಳ್ಳೆ ಕವನಗಳ ಬರೆಯಬಹುದು.
ಯಾವುದಕ್ಕೂ ಕ್ಷಮೆ ಇರಲಿ.
**********************************************
ಬಯಲೋ ಆಲೆಯವೋ 
ಬಿಸಿಲೋ ನೆರಳೋ
ಆಡುವೆನು ನಿನ್ನೊಡನೆ
ಹಗಲಿರುಳ ಮರೆತು
ಬಾಲ್ಯದ ಬುತ್ತಿಗೆ
ಸವಿ ನೆನಪುಗಳ ಹೆಣೆದು
Pic credit - Arun@indtravelphoto 

**********************************************
ಕುಂಚವ ತಾಕಿಸಿ
ಮೋಡವ ಹೊನ್ನಾಗಿಸಿ
ಇಂಚಿಚು ಪಸರಿಸಿ
ಎಲ್ಲಕು ಬಣ್ಣವನೆರಚುವ
ಮುಂಜಾವ ದಿನಚರಿಗೆ
ಮುತ್ತಿನ ಹನಿಗಳ 
ಅಲಂಕಾರ.
********************************************** ಎಲ್ಲರೂ ಶುರುವಿನಲ್ಲಿ 
ಹುಳಿಯ ತುಂಬಿದ ಗಡಿಗೆ
ಮಾಗುವೆವು ದಿನಕಳೆದಂತೆ
ಸಿಹಿ ಕಹಿಯ ಕುಡಿಕೆ
ಯಾವ ಸ್ವಾಧವಿದೆ ಅತಿ,
ಯಾವುದು ಕಡಿಮೆ
ಹೇಳಲಾಗದು ಅದನು,
ಮಾನವ
ಸಂದರ್ಭದ ಮಡಿಕೆ.
Pc.geosmin_photography 
**********************************************
ತುಸು ಜಾಗ, ಎಳೆ ಬಿಸಿಲು,
ಬೇರಿನಡಿ ನೀರು,
ಚಿಗುರೊಡೆಯದೇ ಇರಲಾರೆನು, 
ಧರೆಯ ಚೆಲುವ
ಹೆಚ್ಚಿಸಲು ನಾ ಬರದೇ ಇರಲಾರೆನು.
ಇಂತಿ ನಿನ್ನ ಪ್ರೀತಿಯ "ಹೂ"
**********************************************
ಏನೆಲ್ಲಾ ಕೊಟ್ಟೆ
ಭಾರತಾಂಬೆಯ
ಸ್ವಾವಲಂಬಿ ಮಗಳಾಗಿ
ಸವೆದುಹೋದೆ ನೀ,
ನಿನ್ನಕ್ಕ ತಂಗಿಯರ
ಮಕ್ಕಳ ಭವಿಷ್ಯಕ್ಕಾಗಿ.
ಇನ್ನೆಷ್ಟು ಪೋಷಿಸುವೆ,
ಸಹಿಸುವೆ ಹೇಳು?
ನಿರಾಭಿಮಾನಿ ಪುಂಡರ
ಏಕೆ ಕಲಿಯಲಿಲ್ಲ
ತಾಯಿ
ನೀನಿನ್ನು ಸ್ವಾರ್ಥವ
#ಕನ್ನಡಮ್ಮ #ನಿಸ್ವಾರ್ಥ #ಅಳಲು
***†******†******†******†******†******†******
ಬಿಟ್ಟು ಹೋಗುವುದು
ಸುಲಭದ ಮಾತಲ್ಲ.
ಪ್ರೀತಿ ಇಲ್ಲದಿದ್ದರೆ
ಬೇರೆ,
ಇದು ಹಾಗಲ್ಲ.
ನೀನೇ ಬೇಕಿರುವ ಸಾಂಗತ್ಯ,
ಆದರೆ...
ಯಾರ ಒತ್ತಾಯವೋ,
ಹಣೆಬರಹವೋ.
ದೂರವಾಗುವುದೇ 
ಕ್ಷೇಮ.
ಎಲ್ಲಿರುವೆವೋ 
ಅಲ್ಲಿಂದಲೇ
ಹಾರೈಸುವ ಮನವೇ
ಪ್ರೇಮ.
#ದೂರ #ಪ್ರೀತಿ
******†*******†******†******†******†******†**
ಹಣ್ಣೆಲೆಗಳೇ ಹೂಗಳಂತೆ🍁
ಮೈದಳೆದು ಬಣ್ಣವ
ಧರೆಗುರುಳಿ🍂
ಹಾಸಿದೆ ಹೊನ್ನ ಚಾದರ
ಚಿಗುರೆಲೆಗಳಿಗೆ🌱
ದಾರಿ ಮಾಡಿ
ಸಾರಿದೆ
ಬದಲಾವಣೆಯೇ
ಜಗದ ನಿಯಮ.🌟

#ಬದಲಾವಣೆ
*****-------******-------******-------*****-------******
ಗೂಡ ಕಟ್ಟಲು ಬಂದೆ
ನಿನ್ನ ಒಡಲಲಿ
ನೀನೆ ಒರಗಿರುವುದ
ಕಂಡು,ಬೇಸರ
ಮೂಡಿತು ಮನದಲಿ.
PC: Mystic_Heart

Comments

Popular posts from this blog

ಕಾಗದದ ದೋಣಿ ⛵️

No pictures, but memories for lifetime

ನಮ್ಮ ಊರಿನಲ್ಲಿ ಶೂಟಿಂಗ್ - ೧