ಅವತ್ತು ಮಧ್ಯಾಹ್ನ ಉರಿ ಬಿಸಿಲು, ತುಂಬಾ ಕೆಲಸ. ಫ್ಯಾನಿಗೆ ಬಿಡುವಿಲ್ಲದೆ ತಿರು-ತಿರುಗಿ ಸುಸ್ತಾಗಿತ್ತು. ಮನಸ್ಸು ಮಳೆಯಾಗಲಿ ಎಂದು ಬೇಡುತ್ತಿತ್ತು. ಹಠಾತ್ ಸಿಡಿಲ ಶಬ್ದ ಕೇಳಿಸಿತು. ನೋಡ-ನೋಡುತ್ತಲೇ ಕೋಣೆಯ ತುಂಬಾ ಕತ್ತಲೆ ಆವರಿಸಿತು. "ದಡ್" ಎಂದು ಮತ್ತೊಂದು ಸಿಡಿಲು ಬಡಿದು ನನ್ನನ್ನು ತಾರಸಿಗೆ ಹೊತ್ತೊಯ್ಯಿತು. ತಾರಸಿಯಲ್ಲಿ ಅಮ್ಮ "ಬಟ್ಟೆ ತೆಗಿ ಬೇಗ, ಮಳೆ ಬರುವ ಹಾಗಿದೆ" ಅಂತ ಕೂಗಿದರು. ಇತ್ತ ಅಜ್ಜಿ ಮಜ್ಜಿಗೆ ಮೆಣಸಿನಕಾಯಿ ಇದ್ದ ಮೋರ, ಹಪ್ಪಳ, ಒಣಗಿ ಹಾಕಿದ್ದ ಸೀರೆ - ಇವೆಲ್ಲವನ್ನೂ ಎರಡು ಕೈಲಿ ಹಿಡಿದು ಬಿರಬಿರನೆ ಮೆಟ್ಟಿಲು ಇಳಿದು ಹೋದರು. ಅಮ್ಮನ ಕೂಗಾಟ ನನಗೆ ತಾಕೇ ಇಲ್ಲ ಎಂಬಂತೆ, ಆಕಾಶಕ್ಕೆ ಮುಖವೊಡ್ಡಿ ನನ್ನೆರಡು ಕೈಗಳನ್ನು ಚಾಚಿ ಮಳೆಯ ಬರುವಿಕೆಗೆ ಕಣ್ಮುಚ್ಚಿ ನಿಂತೆ. ಆ ಮೊದಲ ಹನಿಯು ಹಣೆಗೆ ಬೊಟ್ಟು ಇಟ್ಟಾಗ, ನನ್ನ ತನುವೆಲ್ಲ ಕಂಪಿಸಿ, ಯಾರೋ ಅಪ್ಪಿದ ಹಾಗೆ ಅನಿಸಿತು. ಸ್ವಲ್ಪ ನಗು ಚೆಲ್ಲಿ ಮತ್ತೆ ಮೋಡವ ದಿಟ್ಟಿಸಿ ನೋಡಲು, ಸಣ್ಣ ಸಣ್ಣ ನೀರ ಮಣಿಗಳು ನನ್ನ ಬಳಿ ಧಾವಿಸಿ ಬಂದಂತೆ ಅನಿಸಿತು. ವರ್ಷದ ಪ್ರಥಮ ವರ್ಷಧಾರೆ. 🌧️🌧️ ಕಾದ ಇಳೆ ಮೊದಲ ಮಳೆಗಾಗಿ ಅದೆಷ್ಟು ಕಾಯುತ್ತಿತ್ತೋ ಎಂಬಂತೆ, ಮಳೆ ಹನಿಗಳ ಚುಂಬನಕ್ಕೆ ಪುಳಕಗೊಂಡು ಘಮ್ ಎಂದು ಪರಿಮಳ ಸೂಸಲಾರಂಭಿಸಿತು. "ಭೂಮಿ" ಸುಗಂಧದ ಮನೆಯಾಗಿಸಿ, ಒಣಗಿದ ಗಿಡ ಮರಗಳಿಗೆ ಮರುಚೇತನ ನೀಡಿ, ಪ್ರಾಣಿ ಪಕ್ಷಿಗಳಿಗೆ ಉಚಿತ...
picture credit @sampigeeee That which was beautiful has Ended!! Leaving no clue of the Paradise Lost. Memories are immense but, traces inadequate. Each time I pass those old lanes, still scented with jasmine rain— where our laughter once echoed, and dreams carved on broken walls— a skirmish awakens. Nostalgic senses struggle to recreate the memoir.
ನಮ್ಮೂರಿನಲ್ಲಿ ಆಗ ಬಹಳ ಕನ್ನಡ ಚಿತ್ರಗಳ shooting ಮಾಡ್ತಿದ್ರು. ಬೇಸಿಗೆ ರಜೆ ಬಂದ್ರೆ ಊರಲ್ಲಿ ಯಾವುದಾದರೂ ಒಂದು ಚಿತ್ರತಂಡ ಬಿಡಾರ ಬಿಟ್ಟಿರುತಿತ್ತು. "ಕಿಂದರಿ ಜೋಗಿ", "ಮುದ್ದಿನ ಮಾವ", "ತೇನಾಲಿ ರಾಮ" (ಹಿಂದಿ ಸೀರಿಯಲ್), "ಮಾಂಗಲ್ಯ" ಹೀಗೆ ಬಹು ಪ್ರಸಿದ್ಧ ಚಿತ್ರಗಳ shooting ನಮ್ಮ ಊರಿನಲ್ಲೇ ಮಾಡಿದ್ದು. ಈ ಚಿತ್ರಗಳ ಕೃತಜ್ಞತೆ ವಿಭಾಗವ ಸೂಕ್ಷ್ಮವಾಗಿ ಗಮನಿಸಿದರೆ. ನಮ್ಮೂರು ಯಾವುದು ಅನ್ನೋದು ಕಂಡುಹಿಡಿಯುವುದು ಕಷ್ಟದ ಕೆಲಸ ಅಲ್ಲವೇ ಅಲ್ಲಾ. ಸಿನಿಮಾ ತಾರೆಯರ ನೋಡುವುದು, ದಿನ ಪೂರ್ತಿ shooting ಮಾಡುವುದ ಬೇಜಾರು ಮಾಡಿಕೊಳ್ಳದೆ, ಅವರಿಗೆ ನೇರವಾಗಿ ದಿನ ಕಳಿಯುವ ಭಾಗ್ಯ ಮತ್ತೆ ಲಭಿಸಿವುದು ದೂರದ ಮಾತು. ಈ ರೀತಿ ಕಾಲ ಕಳೆಯುವವರು ಯಾರು ಅಂದ್ರ, ಅದೇ ನಾವುಗಳು. ರಜೆಗೆ ಅಜ್ಜನ ಮನೆಗೆ ಹೋದವರು, ಕೆಲ್ಸವಿಲ್ಲದೇ ನೌಕರಿ ಹುಡುಕೋ ಅಣ್ಣಂದಿರು, ಅಕ್ಕಂದಿರು, ಅತ್ತೆ, ಚಿಕ್ಕಮ್ಮ, ದೊಡ್ಡಮ್ಮ ಎಲ್ರು. ವಿಷ್ಣುವರ್ಧನ್, ಮಾಲಾಶ್ರೀ, ರವಿಚಂದ್ರನ್, ಜೂಹಿ ಚಾವ್ಲ, ಶಶಿಕುಮಾರ್, ಶ್ರುತಿ, ರಾಮಕುಮಾರ್, ರಮೇಶ್, ದೊಡ್ಡಣ್ಣ, ದ್ವಾರಕೀಶ್.. ಹೀಗೆ ಬಹಳ ಸಿನಿಮಾ ರಂಗದವರ ನೋಡಿದ ಹೆಗ್ಗಳಿಕೆ ನನ್ನದು. 😂 ಇರ್ಲಿ, ಇದು ಎಲ್ಲರಿಗೂ ಸಾಧ್ಯವೇ.. ಇಲ್ಲಾ ತಾನೇ. ಸಮಾಧಾನ. ಮುಂದ... ಮುಂದ... ನನ್ನ ನೆನಪಲ್ಲಿ ಅಚ್ಚಳಿಯದೇ ಉಳಿದಿರುವ ಕೆಲವು ಸಿನಿಮಾ shooting, ಅದರಲ್ಲೂ ಕಿಂದರಿಜೋಗಿಯ ಒಂದು scene...
Comments
Post a Comment