ಕರಿಮರಿ 🐩ಯಾರು ಅನಾಥರಲ್ಲ 😇
"ಅಜ್ಜ ನಾಯಿನ ಮನೆಗೆ ಕರ್ಕೊಂಡ್ ಹೋಗಣ, ಪೀಸ್ sss".
"ಪುಟ್ಟ ಮರಿ, ಅದನ್ನ ಯಾರ್ ನೋಡ್ಕೋತಾರೆ, ಅದು ಇಲ್ಲೆ ಇರ್ಲಿ, ದಿನಾ ದೇವಸ್ಥಾನಕ್ಕೆ ಬಂದಾಗ ನೋಡುವೆಯಂತೆ, ಈಗ ನಡಿ ಮನೆಗೆ ಹೋಗೋಣ "..
" ನಾನ್ ಬರಲ್ಲ. ಅದ್ನ ಕರ್ಕೊಂಡು ಹೋಗ್ಬೇಕು, ನಂಗೆ ಅದು ಬೇಕೇ ಬೇಕು... ಹ್ಞೂ ಹ್ಞೂ 😭😭.. "
ಕೊನೆಗೆ ಅಜ್ಜ ಮನೆಗೆ ನಾಯಿ ಮರಿ ತೊಗೊಂಡು ಹೋದ್ರು.
ಮನೇಲಿ ಎಲ್ರಿಗೂ ನಾಯಿ ಯಾಕ್ ತಂದ್ರಿ ಅಂತ ಉತ್ತರ ಕೊಡೋದು ಆಯ್ತು ಅಜ್ಜನಿಗೆ.
"ಅದು ಬೀದಿ ನಾಯಿ ಒಳ್ಳೆ breed ಅಲ್ಲ, ಹೋಗಿ ಬಿಟ್ಬಿನ್ನಿ" ಅಂದಳು ಸೊಸೆ.
"ಅಪ್ಪ ಸ್ವಲ್ಪಾನು ಬುದ್ದಿ ಇಲ್ವಾ, ಯಾಕೆ ಹಿಂಗೇ ಮಾಡ್ತಿರಾ, ಹೋಗಿ ಬಿಟ್ಟು ಬನ್ನಿ"ಅಂದ ಮಗ.
ಆದ್ರೆ ಆರ್ಯ ಮಾತ್ರ ನಾಯಿ ಮರಿ ಜೊತೆ ಮಗ್ನವಾಗಿ ಆಡುತಿದ್ದ.
ಅಜ್ಜನ ಕಣ್ಣು gate ಕಡೆ ಹಾಯಿತು.
ಯಾರೋ ನಿಂತಾರೆಲ್ಲ," ಯಾರಪ್ಪ ನೀ? " ಎಂದರು.
"ಏನ್ ಸಾಮಿ, ನನ್ ತಾವೇ ಅಲವ್ರ ನಾಯಿ ಇಸ್ಕೊಂಡ್ ಬಂದ್ದಿದು ನೀವು " ಅಂದ.
"ದುಡ್ಡು ಬೇಕಿತ್ತೆ " ಅಂತ ಅಜ್ಜ ಕೇಳಿದ್ರು.
"ಬೇಡ ಸಾಮಿ, ನೆನ್ನೆ ಯಾರೋ ಹಿಂಗೇ ಪಾಪು ಹಠ ಮಾಡ್ತು ಅಂತ ಇಸ್ಕಡ್ ಹೋದ್ರು, ಅಮೇಕೆ ಅದ್ನ ಮನೆ ಇಂದ ಆಚೇ ಹಾಕಿದ್ರು, ಹೆಂಗೋ ಸಿಕ್ತು ಅನ್ನಿ.. ನೀವು ಹಂಗೆ ಏನಾದ್ರು ಮಾಡಿದ್ರೆ, ಏತಕಂಡ್ ಹೋಗನ ಅಂತ ಕಾಯ್ತ ಇವ್ನಿ ಅಟೆಯ ".
ಅಜ್ಜನಿಗೆ ಮಾತೇ ಬರಲಿಲ್ಲ....
Comments
Post a Comment